2 ಸಮುವೇಲನು 9 : 1 (KNV)
ದಾವೀದನು--ಸೌಲನ ಮನೆಯವರಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ ಎಂದು ಕೇಳಿದನು.
2 ಸಮುವೇಲನು 9 : 2 (KNV)
ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ--ನೀನು ಚೀಬನೋ ಅಂದನು. ಅದಕ್ಕ ವನು--ನಿನ್ನ ದಾಸನು ಅವನೇ ಅಂದನು.
2 ಸಮುವೇಲನು 9 : 3 (KNV)
ಅರಸನು ಅವನಿಗೆ--ನಾನು ಅವನಿಗೆ ದೇವರ ದಯೆತೋರಿಸುವ ಹಾಗೆ ಸೌಲನ ಮನೆಯವರಲ್ಲಿ ಇನ್ನೂ ಯಾವನಾ ದರೂ ಇದ್ದಾನೋ ಅಂದನು. ಆಗ ಚೀಬನು ಅರಸ ನಿಗೆ--ಯೋನಾತಾನನಿಗೆ ಎರಡು ಕಾಲುಕುಂಟಾದ ಒಬ್ಬ ಮಗನಿದ್ದಾನೆ ಅಂದನು.
2 ಸಮುವೇಲನು 9 : 4 (KNV)
ಅವನು ಎಲ್ಲಿ ಇದ್ದಾ ನೆಂದು ಅರಸನು ಅವನನ್ನು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಲ್ಲಿ ಇದ್ದಾನೆ ಅಂದನು.
2 ಸಮುವೇಲನು 9 : 5 (KNV)
ಅರಸನಾದ ದಾವೀದನು ಅವ ನನ್ನು ಆಗ ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಿಂದ ಕರೆಕಳುಹಿ ಸಿದನು.
2 ಸಮುವೇಲನು 9 : 6 (KNV)
ಸೌಲನ ಮಗನಾಗಿರುವ ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರಮಾಡಿದನು.
2 ಸಮುವೇಲನು 9 : 7 (KNV)
ದಾವೀ ದನು--ಮೆಫೀಬೋಶೆತನೇ ಅಂದನು. ಅವನು--ಇಗೋ, ನಿನ್ನ ದಾಸನು ಅಂದನು. ಆಗ ದಾವೀದನು ಅವನಿಗೆ -- ಭಯಪಡಬೇಡ, ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು. ನಿನ್ನ ತಂದೆಯಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರಿಗಿ ಕೊಡುವೆನು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವಿ ಅಂದನು.
2 ಸಮುವೇಲನು 9 : 8 (KNV)
ಆಗ ಅವನು ಅಡ್ಡಬಿದ್ದು--ನೀನು ನನ್ನಂಥ ಸತ್ತನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು ಅಂದನು.
2 ಸಮುವೇಲನು 9 : 9 (KNV)
ಆಗ ಅರಸನು ಸೌಲನ ದಾಸನಾದ ಚೀಬನನ್ನು ಕರೆದು ಅವನಿಗೆ--ನಾನು ಸೌಲನಿಗೂ ಅವನ ಎಲ್ಲ ಮನೆಗೂ ಹೊಂದಿದ ಎಲ್ಲವನ್ನೂ ನಿನ್ನ ಯಜಮಾನನ ಮಗನಿಗೆ ಕೊಟ್ಟಿದ್ದೇನೆ.
2 ಸಮುವೇಲನು 9 : 10 (KNV)
ಆದದರಿಂದ ನೀನೂ ನಿನ್ನ ಕುಮಾರರೂ ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮಗನಾದ ಮೆಫೀಬೋಶೆ ತನು ನಿತ್ಯವೂ ನನ್ನ ಮೇಜಿನಲ್ಲಿ ಊಟ ಮಾಡುವನು ಅಂದನು. ಈ ಚೀಬನಿಗೆ ಹದಿನೈದು ಮಂದಿ ಕುಮಾ ರರೂ ಇಪ್ಪತ್ತು ಮಂದಿ ದಾಸರೂ ಇದ್ದರು.
2 ಸಮುವೇಲನು 9 : 11 (KNV)
ಆಗ ಚೀಬನು ಅರಸನಿಗೆ--ಅರಸನಾದ ನನ್ನ ಒಡೆಯನು ತನ್ನ ದಾಸನಿಗೆ ಆಜ್ಞಾಪಿಸಿದ್ದನ್ನೆಲ್ಲಾ ನಿನ್ನ ದಾಸನು ಹಾಗೆಯೇ ಮಾಡುವನು ಅಂದನು. ಅರಸನ ಕುಮಾರ ರಲ್ಲಿ ಒಬ್ಬನ ಹಾಗೆ ಮೆಫೀಬೋಶೆತನು ಭೋಜನ ಮಾಡುವನೆಂದು ಅರಸನು ಹೇಳಿದನು.
2 ಸಮುವೇಲನು 9 : 12 (KNV)
ಆದರೆ ಮೆಫೀಬೋಶೆತನಿಗೆ ವಿಾಕನೆಂಬ ಹೆಸರುಳ್ಳ ಒಬ್ಬ ಚಿಕ್ಕ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾ ಗಿದ್ದ ಎಲ್ಲರೂ ಮೆಫೀಬೋಶೆತನಿಗೆ ದಾಸರಾಗಿದ್ದರು.
2 ಸಮುವೇಲನು 9 : 13 (KNV)
ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದದ್ದರಿಂದ ಯೆರೂ ಸಲೇಮಿನಲ್ಲೇ ವಾಸವಾಗಿದ್ದನು. ಅವನ ಎರಡು ಕಾಲು ಕುಂಟಾಗಿದ್ದವು.

1 2 3 4 5 6 7 8 9 10 11 12 13